Header Ads

ad

Two biggest scams of recent times in kannada

Image result for karnataka police
ಯುಪಿಎ ಸರ್ಕಾರದ ಅವದಿಯ 3,600 ಕೋಟಿ ಮೊತ್ತದ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕ್ಯಾಪ್ಟರ್ ಖರೀದಿ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಅವರನ್ನು ಯು ಎ ಇ ಗಡಿಪಾರು ಮಾಡಿದ್ದು ತನಿಖೆಗೆ ಭಾರತ ತನ್ನ ವಶಕ್ಕೆ ಪಡೆದಿದೆ. ಒಪ್ಪಂದ ಕುದುರಿಸುವ ಉದ್ದೇಶದಿಂದ ಭಾರತದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡುವುದಕ್ಕಾಗಿ ಅಗಸ್ಟಾ ವೆಸ್ಟ್ ಲ್ಯಾಂಡ್ ನಿಂದ ಹಣ ಪಡೆದ ಆರೋಪ ಮೈಕಲ್ ಮೇಲಿದೆ.
ಕಾಂಗ್ರೆಸ್ನ ಪ್ರಭಾವಿ ನಾಯಕರ ಹೆಸರು ಮೈಕಲ್ ಡೈರಿಯಲ್ಲಿದೇ ಎಂದು ಜಾರಿ ನಿರ್ದೇಶನಾಲಯ ಹೇಳಿದೆ ಗಣ್ಯರ ಓಡಾಟಕ್ಕೆ 12 ಹೆಲಿಕ್ಯಾಪ್ಟರ್ ಗಳನ್ನು ಖರೀದಿಸಲು 2010ರಲ್ಲಿ ಯುಪಿಎ ಮಾಡಿಕೊಂಡ ಒಪ್ಪಂದವನ್ನು ಹಗರಣ ಆರೋಪ ಕೇಳಿ ಬಂದ ಬಳಿಕ 2014ರಲ್ಲಿ ರದ್ದುಗೊಳಿಸಲಾಯಿತು.
ಇನ್ನೊಂದೆಡೆ "ತಾನು ಬ್ಯಾಂಕುಗಳಿಗೆ ಬಾಕಿ ಉಳಿಸಿರುವ ಸಾಲದ ಮೋತ ವನ್ನು ಮರು ಪಾವತಿಸುತ್ತೇನೆ ದಯವಿಟ್ಟು ಸ್ವೀಕರಿಸಿ" ಎಂದು ಬಹುಕೋಟಿ ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ ಭಾರತದ ತನಿಖಾ ಸಂಸ್ಥೆ ಗಳಿಂದ ತಪ್ಪಿಸಿಕೊಂಡು ಬ್ರಿಟನ್ನಲ್ಲಿ ತಳ ಊರಿರುವ ಮಲ್ಯ ಅವರ ಮೇಲೆ ಇಲ್ಲೂ ವಿಚಾರಣೆಯ ತೂಗುಗತ್ತಿ ತೂಗು ತಿದೆ.
ಅವರನ್ನು ಭಾರತಕ್ಕೆ ಹಸ್ತಾಂತರಿಸಿ ಬೇಕು ಎಂದು ಸಲ್ಲಿಸಿದ ಅರ್ಜಿಯ ವಿಚಾರಣೆ ಮುಂದಿನ ವಾರ ಬ್ರಿಟನ್ ನ್ಯಾಯಲಯದಲ್ಲಿ ರೆಡ್ ನಡೆಯಲಿರುವ ಹೊತ್ತಿನಲ್ಲಿ ಮಲ್ಯ ನೀಡಿರುವ ಹೇಳಿಕೆ ಕಾನೂನಿನ ಕುಣಿಕೆಯ ಬಗ್ಗೆ ಅವರಿಗಿರುವ ಆತಂಕವನ್ನು ಸ್ಪಷ್ಟವಾಗಿ ಬಿಂಬಿಸಿದೆ.
ಈ ಎರಡು ರಕ್ಷಣಾ ಹಾಗೂ ಆರ್ಥಿಕ ಅಪರಾಧಗಳ ತನಿಖೆಗಳಲ್ಲಿ ಸಾಧಿಸಿರುವ ಯಶಸ್ಸಿನ ಹಿನ್ನೆಲೆಯಲ್ಲಿ ಇವುಗಳನ್ನು ಸಮರ್ಥವಾಗಿ ನಿರ್ವಹಿಸಿದ ಭಾರತೀಯ ತನಿಖಾ ಸಂಸ್ಥೆಗಳಿಗೆ ಅಭಿನಂದನೆ ಹೇಳಬೇಕು ಇದು ದೇಶಕ್ಕೆ ಸಂದಿರುವ ರಾಜನೈತಿಕ ವಿಜಯವು ಹೌದು.
Please click here to view the translation in english.

No comments

Indian Constitution important article for karnataka PSI Exam

Following are some of the articles which i may feel it may appear in karnataka PSI exam: 1 Union of stat...